ಗುಜರಾತ್ ಚುನಾವಣೆ ಫಲಿತಾಂಶ 2017 : ಕ್ಷಣಗಣನೆ ಆರಂಭ | Oneindia Kannada

2017-12-18 1,575

Gujarat Assembly Elections Results 2017 : Countdown begins. LIVE updates only on Oneindia Kannada.

ಈ ವರ್ಷದ ಕಟ್ಟಕಡೆಯ ಚುನಾವಣೆ ರಿಯಾಲಿಟಿ ಶೋಗೆ ಗುಜರಾತ್ ಅಣಿಯಾಗಿದೆ. ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ತಿಳಿಯಲು ಕ್ಷಣಗಣನೆ ಆರಂಭವಾಗಿದೆ. 22 ವರ್ಷಗಳ ಕಾಲ ಆಡಳಿತ ನಡೆಸಿರುವ ಭಾರತೀಯ ಜನತಾ ಪಕ್ಷ ಪ್ರಥಮ ಬಾರಿಗೆ ಕಾಂಗ್ರೆಸ್ಸಿನಿಂದ ಭಾರೀ ತುರುಸಿನ ಸ್ಪರ್ಧೆಯನ್ನು ಈ ಬಾರಿ ಎದುರಿಸಿದೆ. ತಕ್ಕಡಿ ಯಾವುದೇ ಬದಿಗೂ ತೂಗಬಹುದು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಒಟ್ಟು 182 ಕ್ಷೇತ್ರಗಳಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಸಿಗಬೇಕಾದರೆ 93 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಚುನಾವಣಾಪೂರ್ವ ಸಮೀಕ್ಷೆಗಳಾಗಲಿ, ಚುನಾವಣೋತ್ತರ ಸಮೀಕ್ಷೆಗಳಾಗಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಹೇಳಿವೆ. ಆದರೆ, ಏನು ಬೇಕಾದರೂ ಆಗಬಹುದು ಎಂದು ಹಿಂದಿನ ಚುನಾವಣೆಗಳು ಎಚ್ಚರಿಕೆ ನೀಡಿವೆ.ಸರಿಯಾಗಿ 8 ಗಂಟೆಗೆ ಎಲೆಕ್ಟ್ರಾನಿಕ್ ಮತ ಎಂತ್ರಗಳ ಮತಎಣಿಕೆ ಆರಂಭವಾಗಲಿದೆ. ಇವಿಎಂನಲ್ಲಿ ದೋಷಗಳಿವೆ ಎಂದು ಆರೋಪಿಸಿದ್ದರಿಂದ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಮತಎಣಿಕೆ ಕೇಂದ್ರಗಳಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.

Videos similaires